Something0

ಸಾಂಸ್ಥಿಕ ಸಂಬಂಧಗಳನ್ನು ಬಲಪಡಿಸಲು ಮತ್ತು ಅಂತಿಮ ನಿಯೋಜನೆಗಳಿಗಾಗಿ ಪ್ರಸಿದ್ಧ ಸಂಸ್ಥೆಗಳೊಂದಿಗೆ ಸಂಬಂಧ ಕಲ್ಪಿಸಲು ಸಂಸ್ಥೆಗೆ ಐಟಿ, ಟೆಲಿಕಮ್ಯುನಿಕೇಷನ್ಸ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ರಿಟೇಲ್ಡಿಂಗ್, ಮ್ಯಾನೇಜ್ಮೆಂಟ್ ಮತ್ತು ಅನೇಕ ಇತರ ಉದ್ಯಮ ಕ್ಷೇತ್ರಗಳಲ್ಲಿನ ಅತ್ಯುತ್ತಮ ಕಂಪನಿಗಳೊಂದಿಗೆ ದಿನದಿಂದ ದಿನಕ್ಕೆ ಸಂಬಂಧವನ್ನು ಬಲಪಡಿಸುತ್ತದೆ. ಸಂಸ್ಥೆಯ ಮತ್ತು ವ್ಯಾಪಾರ ಸಮುದಾಯಕ್ಕೆ ಬಲವಾದ ಮತ್ತು ಲಾಭದಾಯಕ ಸಂಬಂಧವನ್ನು ಉಂಟುಮಾಡಿದೆ. ಉದ್ಯಮ ಮತ್ತು ಕಾರ್ಪೋರೆಟ್ ಸಿಬ್ಬಂದಿಗಳನ್ನು ನಿರಂತರವಾಗಿ ವಿದ್ಯಾರ್ಥಿಗಳೊಂದಿಗೆ ಸಂವಹನ ಮಾಡಲು ಆಹ್ವಾನಿಸಲಾಗುತ್ತದೆ ಮತ್ತು ನೈಜ ಜೀವನ ಉದ್ಯಮ / ವ್ಯವಹಾರದ ಸನ್ನಿವೇಶದ ಅನುಭವವನ್ನು ಅವರಿಗೆ ನೀಡಲಾಗುತ್ತದೆ. ಕ್ಯಾಂಪಸ್ ಸಂದರ್ಶನಗಳು ಮತ್ತು ಉದ್ಯೊಗ ಪ್ರಕ್ರಿಯೆಗಳ ಮೂಲಕ ಉದ್ಯೋಗಾವಕಾಶಕ್ಕಾಗಿ ಪ್ರತಿ ವಿದ್ಯಾರ್ಥಿಗೂ ಸಾಕಷ್ಟು ವರ್ಷಗಳಿಂದ ನಿರಂತರವಾಗಿ ನಡೆಸಲಾಗುತ್ತದೆ.

ಉದ್ಯೊಗ ಕೋಶವು ತರಬೇತಿ ಮತ್ತು ಉದ್ಯೋಗ ಸಂಯೋಜಕರಿಂದ ಸಂಘಟಿತರಾಗಿದ್ದು, ಪ್ರತಿ ವಿಭಾಗದಿಂದ ಅನುಭವಿ ಸಿಬ್ಬಂದಿಗಳ ಮಾರ್ಗದರ್ಶನದ ಅಡಿಯಲ್ಲಿ ವಿದ್ಯಾರ್ಥಿಗಳ ಸಮರ್ಪಕ ತಂಡವನ್ನು ಹೊಂದಿದ್ದು, ಕಠಿಣ ಸವಾಲುಗಳನ್ನು ಪೂರೈಸಲು ಅಗತ್ಯವಿರುವ ಬೆಂಬಲ, ಸಂಪನ್ಮೂಲಗಳು ಮತ್ತು ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯೊಂದಿಗೆ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತದೆ.ಒಂದು ಮರದ ಬೀಜವು ತಾನಾಗಿಯೇ ಮರವಾಗಿ ಬೆಳೆಯುವುದಿಲ್ಲ, ಅದು ಮೊಳಕೆಯೊಡೆಯಲು ಪರಿಸರದ ಸ್ವಭಾವಕ್ಕೆ ತನ್ನನ್ನು ತಾನೇ ಅಳವಡಿಸಿಕೊಂಡು ಬೆಳೆಯುತ್ತದೆ. ಹಾಗೆಯೇ ಅವಕಾಶಗಳು ತಾನಾಗಿಯೇ ಬರುವುದಿಲ್ಲ. ಬಂದಂತಹ ಅವಕಾಶಗಳನ್ನು ಪೂರ್ತಿಯಾಗಿ ಉಪಯೋಗಿಸಿ ನಿಮ್ಮ ಕನಸನ್ನು ನನಸಾಗುವಾಗ ಕಡೆಗೆ ಪ್ರಯಾಣ ಬೆಳೆಸಬೇಕು.

ಉದ್ದೇಶ:

  • ವಿದ್ಯಾರ್ಥಿಗಳ ಕೌಶಲ್ಯದ ಉನ್ನತೀಕರಣವು ಉದ್ಯಮದ ನಿರೀಕ್ಷೆಗಳೊಂದಿಗೆ ಅನುಗುಣವಾಗಿರುತ್ತದೆ. ಜೀವನಪರ್ಯಂತ ವೃತ್ತಿಜೀವನದ ನಿರ್ಣಯ ಮಾಡುವ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಅಧಿಕಾರ ಮಾರ್ಗದರ್ಶನ ಮಾಡುವುದು
  • ಕ್ಯಾಂಪಸ್ ಮೂಲಕ ಪ್ರಸಿದ್ಧ ಸಂಸ್ಥೆಯಲ್ಲಿ ಉದ್ಯೊಗಕ್ಕಾಗಿ ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದು
  • ವಿವಿಧ ಕೈಗಾರಿಕಾ ಸಂಸ್ಥೆಗಳಿಗೆ ಭೇಟಿಯ ನೀಡುವ ಮೂಲಕ ಉದ್ಯಮ-ಸಂಸ್ಥೆಯ ಪರಸ್ಪರ ಸಂಬಂಧ ವೃಧಿಸುವುದು
  • ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉದ್ಯಮಶೀಲತೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದು..